ನಗೆ ಬಾಂಬ್ ಈ ವಾರ ಬಿಡುಗಡೆ
Posted date: 09 Thu, Jan 2014 – 09:05:06 AM
ನೂರು ಸಿನೆಮಾಗಳ ಸಂಗೀತ ನಿರ್ದೇಶಕ, ಸ್ಥಾಯಿ ಡಿಜಿಟಲ್ ಸ್ಟುಡಿಯೋ ಸ್ಥಾಪಕ ರಾಜೇಶ್ ರಾಮನಾಥ್ ಅವರ ಮೊದಲ ನಿರ್ಮಾಣದ ಚಿತ್ರ `ನಗೆ ಬಾಂಬ್` 2014ನೇ ವರ್ಷದ ಮೊದಲು ಬಿಡುಗಡೆ ಆಗುತ್ತಿರುವ ನಕ್ಕು ನಲಿಸುವಂತಹ ಚಿತ್ರ. 
 
ಹೊಸ ವಿಧಾನದ ಪ್ರಚಾರ ಹಮ್ಮಿಕೊಂಡು ಸಂತೋಷದಿಂದ ಇರುವ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಚಿತ್ರದ ಯಶಸ್ಸಿನ ಬಗ್ಗೆ ಆತ್ಮ ವಿಶ್ವಾಸದಿಂದ ಇದ್ದಾರೆ. 
ಸಂಕಲನಕಾರ, ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಹಿಂದೆ ಹಾರ್ಟ್ ಬೇಟ್ಸ್, ರಾಕಿ ಚಿತ್ರಗಳಿಗೆ ನಿರ್ದೇಶನ ಮಾಡಿ ಈ ಬಾರಿ ಸಂಪೂರ್ಣ ಹಾಸ್ಯಮಯ ಚಿತ್ರಕ್ಕೆ ಚುಕ್ಕಾಣಿ ಹಿಡಿದಿದ್ದಾರೆ. 
 
ರವಿಶಂಕರ್ ಗೌಡ ಹಾಗೂ ಅನಿತಾ, ಮೌಸಾಮಿ, ಆನಂದಪ್ರಿಯ ಸಂಭಾಷಣೆ ಜೊತೆಗೆ ಪಾತ್ರವನ್ನು ಸಹ ಮಾಡಿದ್ದಾರೆ.ರಾಜೇಂದ್ರ ಕಾರಂತ್, ಸಾಧು ಕೋಕಿಲ ಮ್ಯಾಜಿಕ್ ಜಿನ್ನಿ, ಲಯೇಂದ್ರ ಸಹ ತಾರಾಗಣದಲ್ಲಿ ಇದ್ದಾರೆ. 
 
ಕಿರಣ್ ಹಾಗೂ ಸುರೇಶ್ ಅವರ ಛಾಯಾಗ್ರಹಣ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಅವರ ಸಂಕಲನ, ವೆಂಕಟ್ ಅವರ ಸಾಹಸ, ರೆಡ್ಡಿ ಅವರ ನೃತ್ಯ ಸಂಯೋಜನ ಈ ಚಿತ್ರಕ್ಕಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed